ಸಂಜೆ ಪ್ರಭ ಉಡುಪಿ: ಬೆಂಗಳೂರಿನ ಚಿತ್ರಸಂತೆ ಸಂಸ್ಥೆಯು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನೀಡುವ “ವೀರವನಿತೆ 2026” ವರ್ಷದ ಮಹಿಳೆ ಪ್ರಶಸ್ತಿಯನ್ನು ಉಡುಪಿಯ ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿ ಯವರಿಗೆ ಮಾರ್ಚ್ 6 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟಿ ತಾರ ಅನುರಾದ ರವರು ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಿದರು.
ಸಮಾರಂಭದಲ್ಲಿ ಚಿತ್ರಸಂತೆ ಸಂಸ್ಥೆಯ ಪ್ರಮುಖರಾದ ಅರುಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವೀಣಾ ಶೆಟ್ಟಿ ಯವರು ಸುಮಾರು ಮೂವತ್ತು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹೀಗೆ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
