Skip to content
ಸಂಜೆ ಪ್ರಭ

ಸಂಜೆ ಪ್ರಭ

June 18, 2026
Primary Menu
  • ರಾಜ್ಯ
    • ರಾಜಕೀಯ
    • ಬೆಂಗಳೂರು
  • ಕರಾವಳಿ
    • ಮಂಗಳೂರು
    • ಉಡುಪಿ
  • ರಾಷ್ಟ್ರೀಯ
    • ಜಗತ್ತು
    • ವಿದೇಶ
  • ವ್ಯಾಪಾರ
  • ತಂತ್ರಜ್ಞಾನ ಸುದ್ದಿ
  • ಕ್ರೀಡೆ
    • ಕ್ರಿಕೆಟ್
    • ಫುಟ್ಬಾಲ್
  • ಜೀವನ ಶೈಲಿ
    • ಫ್ಯಾಷನ್
  • ಪ್ರಯಾಣ
  • ಸಿನಿಮಾ
Light/Dark Button
  • ಉಡುಪಿ

ಕೋಟ ಶ್ರೀನಿವಾಸ ಪೂಜಾರಿಯವರಿಂದ ಕರಾವಳಿ ಜಂಕ್ಷನ್ ನಿಂದ ಕಲ್ಮಾಡಿವರೆಗೆ ರಸ್ತೆ ಕಾಮಗಾರಿ ವೀಕ್ಷಣೆ

ಸಂಜೆ ಪ್ರಭ March 9, 2026 1 minute read
WhatsApp Image 2026-03-07 at 11.26.12 PM
ಶೇರ್ ಮಾಡಿ:

ಸಂಜೆ ಪ್ರಭ ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ- ಕರಾವಳಿ ಜಂಕ್ಷನ್ ನಿಂದ ಕಲ್ಮಾಡಿ ಸೇತುವೆ ವರೆಗಿನ ಇಕ್ಕೆಲಗಳಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು. ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ ಭೂ ಮಾಲಿಕರಿಗೆ ಪರಿಹಾರ ನೀಡದಿರುವುದು, ಭಾಗಶಃ ಸ್ವಾಧೀನವಾದ ಭೂಮಿಗಳಿಗೆ ಪೋಡಿ ರಚನೆಯಲ್ಲಾದ ವಿಳಂಬದಿಂದ ಹಣ ಪಾವತಿಯ ಸಮಸ್ಯೆ, ವಿದ್ಯುತ್ ಕಂಬಗಳ ಸ್ಥಳಾಂತರದ ಸಮಸ್ಯೆಯಿಂದ ಮರಗಳ ತೆರವಿಗೆ ಅಡಚಣೆ, ಮುಂತಾದ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದ ಸಂಸದರು ಹಾಗೊಂದು ವೇಳೆ ಭೂ ಮಾಲಿಕರ ಖಾತಾ ಸಮಸ್ಯೆಗಳಿದ್ದಲ್ಲಿ ಅಥವಾ ವ್ಯಾಜ್ಯ, ತಕರಾರುಗಳಿದ್ದಲ್ಲಿ ಪರಿಹಾರದ ಹಣವನ್ನು ಅವರ ಹೆಸರಲ್ಲಿ ಠೇವಣಿ ಇರಿಸುವಂತೆ ಸೂಚಿಸಿದರು. ಹಾಗೆಯೇ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮರಗಳ ತೆರವಿಗೆ ಅನುಮತಿ ನೀಡುವಂತೆ ಸ್ಥಳದಲ್ಲೇ ತಿಳಿಸಿದರು.

ಹಲವು ದಿನಗಳಿಂದ ಕಂಬಗಳ ಸ್ಥಳಾಂತರಕ್ಕೆ ಕಾಯುತ್ತಿದ್ದೇವೆ. ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ಎಂದು ಸ್ಥಳೀಯರು ತಿಳಿಸಿದಾಗ, ಶಾಲಾ ಮಕ್ಕಳ ಪರೀಕ್ಷೆ ಅವಧಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸ್ಥಗಿತಗೊಳಿಸಿ ಕಂಬಗಳ ತೆರವಿಗೆ ಅವಕಾಶ ಕಲ್ಪಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುಮಾರು 2 ಕಿ.ಮೀ ರಸ್ತೆಯಲ್ಲಿ ಸಂಚರಿಸಿದ ಸಂಸದರು ಅಧಿಕಾರಿಗಳ ತಂಡಕ್ಕೆ ಸಮರ್ಪಕ ದಾಖಲೆ ನೀಡಿದವರಿಗೆ ಒಂದು ವಾರದಲ್ಲಿ ಹಣ ಪಾವತಿ ಮಾಡುವಂತೆ, 3ಡಿ ಅಪೂರ್ಣವಾದವರಿಗೆ 15 ದಿನಗಳ ಒಳಗೆ ಪರಿಹಾರ ನೀಡುವಂತೆ ತಿಳಿಸಿ ಯಾವುದೇ ಕಾರಣಕ್ಕೂ ವಿಳಂಬವಿಲ್ಲದೆ ರಸ್ತೆ ಕೆಲಸ ಮಳೆಗಾಲದೊಳಗೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಸಂಸದರೊಂದಿಗೆ ಸಹಾಯಕ ಕಮಿಷನರ್ ಶ್ರೀಮತಿ ರಶ್ಮಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸುಧಾಕರ್ ನಾಯಕ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಲೋಕೇಶ್, ಶಶಿಧರ್, ನವೀನ್, ಗ್ರಾಮ ಆಡಳಿತ ಅಧಿಕಾರಿ ಕಾರ್ತಿಕೇಯ, ಮಾಜಿ ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಹರೀಶ್ ರಾಂ, ಮಲ್ಪೆ ಠಾಣಾಧಿಕಾರಿ ಈರಣ್ಣ ಶಿರಗುಪ್ಪಿ ಮುಂತಾದವರಿದ್ದರು.

ಶೇರ್ ಮಾಡಿ:

Post navigation

Previous: ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿಗೆ “ವೀರವನಿತೆ-2026” ಪ್ರಶಸ್ತಿ ಪ್ರದಾನ
Next: ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ

Related Stories

WhatsApp Image 2026-03-09 at 12.31.28 AM
  • ಉಡುಪಿ

ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ

ಸಂಜೆ ಪ್ರಭ March 9, 2026
WhatsApp Image 2026-03-08 at 9.36.29 AM
  • ಉಡುಪಿ

ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ

ಸಂಜೆ ಪ್ರಭ March 9, 2026
WhatsApp Image 2026-03-07 at 11.14.32 PM
  • ಉಡುಪಿ

ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿಗೆ “ವೀರವನಿತೆ-2026” ಪ್ರಶಸ್ತಿ ಪ್ರದಾನ

ಸಂಜೆ ಪ್ರಭ March 9, 2026

ಫಾಲೌ ಮಾಡಿ

  • ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್
  • ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ
  • ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ
  • ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ
  • ಕೋಟ ಶ್ರೀನಿವಾಸ ಪೂಜಾರಿಯವರಿಂದ ಕರಾವಳಿ ಜಂಕ್ಷನ್ ನಿಂದ ಕಲ್ಮಾಡಿವರೆಗೆ ರಸ್ತೆ ಕಾಮಗಾರಿ ವೀಕ್ಷಣೆ

ಹಳೆಯ ಸುದ್ದಿ

WhatsApp Image 2026-03-09 at 12.51.01 AM
  • ಬೆಂಗಳೂರು

ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್

ಸಂಜೆ ಪ್ರಭ March 9, 2026
WhatsApp Image 2026-03-09 at 12.39.13 AM
  • ಬೆಂಗಳೂರು

ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ

ಸಂಜೆ ಪ್ರಭ March 9, 2026
WhatsApp Image 2026-03-09 at 12.31.28 AM
  • ಉಡುಪಿ

ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ

ಸಂಜೆ ಪ್ರಭ March 9, 2026
WhatsApp Image 2026-03-08 at 9.36.29 AM
  • ಉಡುಪಿ

ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ

ಸಂಜೆ ಪ್ರಭ March 9, 2026
  • Facebook
  • X
  • YouTube
  • Instagram

Contact Us | About Us | Privacy Policy | Terms of Use

Address: Venkatesh Pai
No. 2068, 8th Main
‘E’ Block, Rajaji Nagar II Stage,
Bangalore – 560010
Karnataka
Email: sanjeprabha@gmail.com
Phone No: +91 98864 96677

[gigatech_copy_rights] | ReviewNews by AF themes.