Skip to content
ಸಂಜೆ ಪ್ರಭ

ಸಂಜೆ ಪ್ರಭ

June 18, 2026
Primary Menu
  • ರಾಜ್ಯ
    • ರಾಜಕೀಯ
    • ಬೆಂಗಳೂರು
  • ಕರಾವಳಿ
    • ಮಂಗಳೂರು
    • ಉಡುಪಿ
  • ರಾಷ್ಟ್ರೀಯ
    • ಜಗತ್ತು
    • ವಿದೇಶ
  • ವ್ಯಾಪಾರ
  • ತಂತ್ರಜ್ಞಾನ ಸುದ್ದಿ
  • ಕ್ರೀಡೆ
    • ಕ್ರಿಕೆಟ್
    • ಫುಟ್ಬಾಲ್
  • ಜೀವನ ಶೈಲಿ
    • ಫ್ಯಾಷನ್
  • ಪ್ರಯಾಣ
  • ಸಿನಿಮಾ
Light/Dark Button
  • ಉಡುಪಿ

ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ

ಸಂಜೆ ಪ್ರಭ March 9, 2026 (Last updated: March 9, 2026)
WhatsApp Image 2026-03-09 at 12.31.28 AM
ಶೇರ್ ಮಾಡಿ:

ಸಂಜೆ ಪ್ರಭ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ರವಿವಾರ ಉಡುಪಿ ಶಾಖೆಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರಾದ ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಯ ಉಪನಿರೀಕ್ಷಕಿ ವೈಲೆಟ್ ಫೆಮಿನಾ, ಉಡುಪಿ ನಗರಸಭೆ ಸಿಬ್ಬಂದಿ ಚಿತ್ರಲೇಖ ಚೌಡವ್ವನ, ಉದ್ಯಮಿ ವಿದ್ಯಾಲತಾ ಯು.ಶೆಟ್ಟಿ, ಸಮಾಜ ಸೇವಕಿ ಅನಿತಾ ಡಿಸೋಜ ಬೆಳ್ಮಣ್, ಹೂಡೆ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಬೀನ, ನಾಗಿ ಕುಲಾಲ್, ಮಾಯ ಕಾಮತ್ ಅವರನ್ನು ಸನ್ಮಾನಿಸ ಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪನಿರೀಕ್ಷಕಿ ವೈಲೆಟ್ ಫೆಮಿನಾ, ಮಹಿಳೆಯರು ತಮಗೆ ಅನ್ಯಾಯವಾದಾಗ, ಅಸಹಾಯಕರಾದಾಗ ಕೂಡಲೇ ಪೊಲೀಸ್ ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಬೇಕು. ಪೊಲೀಸ್ ಇಲಾಖೆ ಯಾವತ್ತೂ ಮಹಿಳೆಯ ನೆರವಿಗೆ ಬರುತ್ತದೆ. ನಮ್ಮ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದರೆ ನಾವು ಕಾನೂನು ಪಾಲನೆ ಮಾಡಲೇಬೇಕು ಎಂದು ಹೇಳಿದರು.


ಮಲ್ಪೆ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ಮಲಬಾರ್ ಗೋಲ್ಡ್ ಮಹಿಳೆಯರನ್ನು ಗುರುತಿಸಿ ಗೌರವಿಸುವ ಉತ್ತಮ ಕಾರ್ಯಕ್ರಮ ನಡೆಸಿದೆ. ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಈ ಸಂಸ್ಥೆಯ ಬೆಳವಣಿಗೆಗೆ ಪ್ರತಿಯೊಬ್ಬರೂ ಕೂಡ ಕೈಜೋಡಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಥೆರಫಿಸ್ಟ್ ತನುಜಾ ಮಾಬೆನ್, ರೂಪದರ್ಶಿ ವಿದ್ಯಾ ಸರಸ್ವತಿ ಮಾತನಾಡಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ಶಾಖೆಯ ಮಹಿಳಾ ಸಿಬ್ಬಂದಿಗಳಿಗೆ ಹೂವು ಕೊಟ್ಟು ಶುಭ ಕೋರಲಾಯಿತು. ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ಮುಸ್ತಫಾ ಎ.ಕೆ
ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ, ವಿಘ್ನೇಶ್ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ದಯಾನಂದ ಕಾರ್ಯಕ್ರಮ ನಿರೂಪಿಸಿದರು.

ಶೇರ್ ಮಾಡಿ:

Post navigation

Previous: ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ
Next: ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ

Related Stories

WhatsApp Image 2026-03-08 at 9.36.29 AM
  • ಉಡುಪಿ

ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ

ಸಂಜೆ ಪ್ರಭ March 9, 2026
WhatsApp Image 2026-03-07 at 11.26.12 PM
  • ಉಡುಪಿ

ಕೋಟ ಶ್ರೀನಿವಾಸ ಪೂಜಾರಿಯವರಿಂದ ಕರಾವಳಿ ಜಂಕ್ಷನ್ ನಿಂದ ಕಲ್ಮಾಡಿವರೆಗೆ ರಸ್ತೆ ಕಾಮಗಾರಿ ವೀಕ್ಷಣೆ

ಸಂಜೆ ಪ್ರಭ March 9, 2026
WhatsApp Image 2026-03-07 at 11.14.32 PM
  • ಉಡುಪಿ

ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿಗೆ “ವೀರವನಿತೆ-2026” ಪ್ರಶಸ್ತಿ ಪ್ರದಾನ

ಸಂಜೆ ಪ್ರಭ March 9, 2026

ಫಾಲೌ ಮಾಡಿ

  • ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್
  • ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ
  • ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ
  • ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ
  • ಕೋಟ ಶ್ರೀನಿವಾಸ ಪೂಜಾರಿಯವರಿಂದ ಕರಾವಳಿ ಜಂಕ್ಷನ್ ನಿಂದ ಕಲ್ಮಾಡಿವರೆಗೆ ರಸ್ತೆ ಕಾಮಗಾರಿ ವೀಕ್ಷಣೆ

ಹಳೆಯ ಸುದ್ದಿ

WhatsApp Image 2026-03-09 at 12.51.01 AM
  • ಬೆಂಗಳೂರು

ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್

ಸಂಜೆ ಪ್ರಭ March 9, 2026
WhatsApp Image 2026-03-09 at 12.39.13 AM
  • ಬೆಂಗಳೂರು

ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ

ಸಂಜೆ ಪ್ರಭ March 9, 2026
WhatsApp Image 2026-03-09 at 12.31.28 AM
  • ಉಡುಪಿ

ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ

ಸಂಜೆ ಪ್ರಭ March 9, 2026
WhatsApp Image 2026-03-08 at 9.36.29 AM
  • ಉಡುಪಿ

ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ

ಸಂಜೆ ಪ್ರಭ March 9, 2026
  • Facebook
  • X
  • YouTube
  • Instagram

Contact Us | About Us | Privacy Policy | Terms of Use

Address: Venkatesh Pai
No. 2068, 8th Main
‘E’ Block, Rajaji Nagar II Stage,
Bangalore – 560010
Karnataka
Email: sanjeprabha@gmail.com
Phone No: +91 98864 96677

[gigatech_copy_rights] | ReviewNews by AF themes.