Skip to content
ಸಂಜೆ ಪ್ರಭ

ಸಂಜೆ ಪ್ರಭ

June 18, 2026
Primary Menu
  • ರಾಜ್ಯ
    • ರಾಜಕೀಯ
    • ಬೆಂಗಳೂರು
  • ಕರಾವಳಿ
    • ಮಂಗಳೂರು
    • ಉಡುಪಿ
  • ರಾಷ್ಟ್ರೀಯ
    • ಜಗತ್ತು
    • ವಿದೇಶ
  • ವ್ಯಾಪಾರ
  • ತಂತ್ರಜ್ಞಾನ ಸುದ್ದಿ
  • ಕ್ರೀಡೆ
    • ಕ್ರಿಕೆಟ್
    • ಫುಟ್ಬಾಲ್
  • ಜೀವನ ಶೈಲಿ
    • ಫ್ಯಾಷನ್
  • ಪ್ರಯಾಣ
  • ಸಿನಿಮಾ
Light/Dark Button
  • ರಾಜ್ಯ

ಒಳ ಮೀಸಲಾತಿ ಹೋರಾಟಗಾರರಿಂದ ಶಾಸಕರಿಗೆ ಮನವಿ

ಸಂಜೆ ಪ್ರಭ March 9, 2026 (Last updated: March 9, 2026) 1 minute read
WhatsApp Image 2026-03-07 at 8.27.43 PM
ಶೇರ್ ಮಾಡಿ:

ಸಂಜೆ ಪ್ರಭ ತುರುವೇಕೆರೆ: ತಾಲ್ಲೂಕಿನ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಟಿ.ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿನ 56,432 ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲು ದಿನಾಂಕ 27-02-2026 ರಂದು ಸೂಚಿಸಿರುವ ಹಿನ್ನೆಲೆಯಲ್ಲಿ, ಈ ನೇಮಕಾತಿಯನ್ನು ಒಳಮೀಸಲಾತಿ ಅಳವಡಿಸದೇ ನಡೆಸುವ ಸಾಧ್ಯತೆ ಇರುವುದರಿಂದ ಮಾದಿಗ ಸಮುದಾಯದ ಪರವಾಗಿ ಆತಂಕ ವ್ಯಕ್ತಪಡಿಸಲಾಯಿತು. ಸರ್ಕಾರ ಒಂದು ಕಡೆ ಒಳಮೀಸಲಾತಿ ಜಾರಿಗೆ ಆದೇಶ ನೀಡಿದ್ದು, ಮತ್ತೊಂದೆಡೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ನೇಮಕಾತಿಯಲ್ಲಿ ಒಳಮೀಸಲಾತಿಯನ್ನು ಅನುಸರಿಸದಿರುವುದು ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಯಿತು.
ಈಗಾಗಲೇ ಒಳಮೀಸಲಾತಿ ಕುರಿತ ಕಾಯ್ದೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡು, ರಾಜ್ಯಪಾಲರ ಅಂಕಿತವೂ ಪಡೆದಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸಬೇಕು. ಇಲ್ಲವಾದಲ್ಲಿ ಮಾದಿಗ ಸಮುದಾಯದ ವಿದ್ಯಾವಂತ ನಿರುದ್ಯೋಗಿ ಯುವಕರ ಭವಿಷ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರಕುಮಾರ್ ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್, ಒಳ ಮೀಸಲಾತಿ ಹೋರಾಟಗಾರರು ಉಪಸ್ಥಿತರಿದ್ದರು.

ಶೇರ್ ಮಾಡಿ:

Post navigation

Previous: ಬೀದಿ ಬದಿ ವ್ಯಾಪಾರಿಗಳಿಗೆಕ್ಯೂ-ಆರ್ ಕೋಡ್ ಒಳಗೊಂಡ ಗುರುತಿನ ಚೀಟಿಯನ್ನು ವಿತರಿಸಿ- ಮಹೇಶ್ವರ್ ರಾವ್
Next: ಅಲ್ಪಸಂಖ್ಯಾತ ಓಲೈಕೆ ಬಹುಸಂಖ್ಯಾತರಿಗೆ ಚಂಬು, ಬ್ರಾಹ್ಮಣ ಸಮುದಾಯವನ್ನು ನಿರ್ಲಕ್ಷಿಸಿದ ಸರ್ಕಾರ- ರಾಘವೇಂದ್ರ ಮಯ್ಯ

Related Stories

WhatsApp Image 2026-03-07 at 8.48.40 PM
  • ರಾಜ್ಯ

ಅಲ್ಪಸಂಖ್ಯಾತ ಓಲೈಕೆ ಬಹುಸಂಖ್ಯಾತರಿಗೆ ಚಂಬು, ಬ್ರಾಹ್ಮಣ ಸಮುದಾಯವನ್ನು ನಿರ್ಲಕ್ಷಿಸಿದ ಸರ್ಕಾರ- ರಾಘವೇಂದ್ರ ಮಯ್ಯ

ಸಂಜೆ ಪ್ರಭ March 9, 2026
WhatsApp Image 2026-03-07 at 8.25.12 PM
  • ರಾಜ್ಯ

ಬೀದಿ ಬದಿ ವ್ಯಾಪಾರಿಗಳಿಗೆಕ್ಯೂ-ಆರ್ ಕೋಡ್ ಒಳಗೊಂಡ ಗುರುತಿನ ಚೀಟಿಯನ್ನು ವಿತರಿಸಿ- ಮಹೇಶ್ವರ್ ರಾವ್

ಸಂಜೆ ಪ್ರಭ March 9, 2026

ಫಾಲೌ ಮಾಡಿ

  • ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್
  • ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ
  • ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ
  • ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ
  • ಕೋಟ ಶ್ರೀನಿವಾಸ ಪೂಜಾರಿಯವರಿಂದ ಕರಾವಳಿ ಜಂಕ್ಷನ್ ನಿಂದ ಕಲ್ಮಾಡಿವರೆಗೆ ರಸ್ತೆ ಕಾಮಗಾರಿ ವೀಕ್ಷಣೆ

ಹಳೆಯ ಸುದ್ದಿ

WhatsApp Image 2026-03-09 at 12.51.01 AM
  • ಬೆಂಗಳೂರು

ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್

ಸಂಜೆ ಪ್ರಭ March 9, 2026
WhatsApp Image 2026-03-09 at 12.39.13 AM
  • ಬೆಂಗಳೂರು

ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ

ಸಂಜೆ ಪ್ರಭ March 9, 2026
WhatsApp Image 2026-03-09 at 12.31.28 AM
  • ಉಡುಪಿ

ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ

ಸಂಜೆ ಪ್ರಭ March 9, 2026
WhatsApp Image 2026-03-08 at 9.36.29 AM
  • ಉಡುಪಿ

ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ

ಸಂಜೆ ಪ್ರಭ March 9, 2026
  • Facebook
  • X
  • YouTube
  • Instagram

Contact Us | About Us | Privacy Policy | Terms of Use

Address: Venkatesh Pai
No. 2068, 8th Main
‘E’ Block, Rajaji Nagar II Stage,
Bangalore – 560010
Karnataka
Email: sanjeprabha@gmail.com
Phone No: +91 98864 96677

[gigatech_copy_rights] | ReviewNews by AF themes.