Skip to content
ಸಂಜೆ ಪ್ರಭ

ಸಂಜೆ ಪ್ರಭ

June 18, 2026
Primary Menu
  • ರಾಜ್ಯ
    • ರಾಜಕೀಯ
    • ಬೆಂಗಳೂರು
  • ಕರಾವಳಿ
    • ಮಂಗಳೂರು
    • ಉಡುಪಿ
  • ರಾಷ್ಟ್ರೀಯ
    • ಜಗತ್ತು
    • ವಿದೇಶ
  • ವ್ಯಾಪಾರ
  • ತಂತ್ರಜ್ಞಾನ ಸುದ್ದಿ
  • ಕ್ರೀಡೆ
    • ಕ್ರಿಕೆಟ್
    • ಫುಟ್ಬಾಲ್
  • ಜೀವನ ಶೈಲಿ
    • ಫ್ಯಾಷನ್
  • ಪ್ರಯಾಣ
  • ಸಿನಿಮಾ
Light/Dark Button
  • ರಾಜ್ಯ

ಬೀದಿ ಬದಿ ವ್ಯಾಪಾರಿಗಳಿಗೆಕ್ಯೂ-ಆರ್ ಕೋಡ್ ಒಳಗೊಂಡ ಗುರುತಿನ ಚೀಟಿಯನ್ನು ವಿತರಿಸಿ- ಮಹೇಶ್ವರ್ ರಾವ್

ಸಂಜೆ ಪ್ರಭ March 9, 2026 1 minute read
WhatsApp Image 2026-03-07 at 8.25.12 PM
ಶೇರ್ ಮಾಡಿ:

ಸಂಜೆ ಪ್ರಭ ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕ್ಯೂ-ಆರ್ ಕೋಡ್ ಒಳಗೊಂಡ ಗುರುತಿನ ಚೀಟಿಯನ್ನು ಮಾರ್ಚ್ ತಿಂಗಳಾಂತ್ಯದೊಳಗಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬೀದಿ ಬದಿ ವ್ಯಾಪಾರಿಗಳಿಗೆ ಸಂಪೂರ್ಣ ಮಾಹಿತಿ ಒಳಗೊಂಡ ಗುರುತಿನ ಚೀಟಿಯನ್ನು ಮುದ್ರಿಸಿ ವಿತರಣೆ ಮಾಡಬೇಕು. ಈ ಸಂಬಂಧ ಮತದಾರರ ಗುರುತಿನ ಚೀಟಿ ಮಾದರಿಯಲ್ಲಿ ಗುರುತಿನ ಚೀಟಿಯನ್ನು ಮುದ್ರಿಸಿ ಅವಶ್ಯಕ ಮಾಹಿತಿಯನ್ನು ಗುರುತಿನ ಚೀಟಿಯಲ್ಲಿ ನೀಡಬೇಕು. ಉಳಿದ ಸಂಪೂರ್ಣ ಮಾಹಿತಿಯನ್ನು ಕ್ಯೂ-ಆರ್ ಕೋಡ್‌ನಲ್ಲಿ ಲಭ್ಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಬೀದಿ ವ್ಯಾಪಾರಿಗಳಿಗೆ ಹೊಸದಾಗಿ ನೀಡುವ ಗುರುತಿನ ಚೀಟಿಯಲ್ಲಿ ಯಾವುದೇ ಲೋಪದೋಷಗಳಿರದಂತೆ ನೋಡಿಕೊಳ್ಳಬೇಕು. ಎಲ್ಲಾ 5 ನಗರ ಪಾಲಿಕೆಗಳಲ್ಲಿ ಒಂದೇ ಮಾದರಿಯ ಗುರುತಿನ ಚೀಟಿಯನ್ನು ಮುದ್ರಿಸಿ ಮಾರ್ಚ್ ತಿಂಗಳಾಂತ್ಯದೊಳಗಾಗಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಂಟಿ ಮನೆಗಳಿಗೆ ಅನುದಾನ ಒದಗಿಸಿ:
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಒಂಟಿ ಮನೆ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಕೂಡಲೇ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು. ತಿಂಗಳಾಂತ್ಯದೊಳಗಾಗಿ ಆಯ್ಕೆಯಾದ ಎಲ್ಲರಿಗೂ ಕಾರ್ಯದೇಶ ನೀಡಿ ಕೆಲಸ ಪ್ರಾರಂಭಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಜಿಬಿಎ ವ್ಯಾಪ್ತಿಯಲ್ಲಿ 27,585 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ತಂತ್ರಾಂಶದಲ್ಲಿ ಎಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಪೂರ್ಣ ಮಾಹಿತಿ ಲಭ್ಯವಿದೆ. ಶೀಘ್ರದಲ್ಲೇ ಹೊಸ ಗುರುತಿನ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದೆಂದು ಮಾಹಿತಿ ನೀಡಿದರು.

ನಗರದ 5 ನಗರ ಪಾಲಿಕೆಗಳಲ್ಲಿ ಈಗಾಗಲೇ ಗುರುತಿನ ಚೀಟಿಗಳ ವಿತರಣಾ ಕಾರ್ಯವನ್ನು ಪ್ರಾರಂಭಿಸಲಾಗಿತ್ತು. ವಿತರಿಸಿರುವ ಗುರುತಿನ ಚೀಟಿಗಳಲ್ಲಿ ಸರಿಯಾದ ಮಾಹಿತಿ ಲಭ್ಯವಿಲ್ಲವೆಂದು ಬೀದಿ ಬದಿ ವ್ಯಾಪಾರಿಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸಂಬಂಧ ಮಾನ್ಯ ಉಚ್ಚ ನ್ಯಾಯಾಲಯವು ಸಂಪೂರ್ಣ ಮಾಹಿತಿಯುಳ್ಳ ಗುರುತಿನ ಚೀಟಿಗಳನ್ನು ವಿತರಿಸಲು ನಿರ್ದೇಶನ ನೀಡಿತ್ತು. ಅದರಂತೆ ಈಗ ಹೊಸ ಮಾದರಿಯಲ್ಲಿ ಗುರುತಿನ ಚೀಟಿಯನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ 5 ನಗರ ಪಾಲಿಕೆಗಳಲ್ಲಿ ಅದೇ ಮಾದರಿಯಲ್ಲಿ ಸಿದ್ಧಪಡಿಸಿ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.

ಕಲ್ಯಾಣ ಕಾರ್ಯಕ್ರಮಗಳಡಿ ಎಲೆಕ್ಟ್ರಿಕ್ ವೆಜಿಟೆಬಲ್ ಕಾರ್ಟ್, ಎಲೆಕ್ಟ್ರಿಕ್ ಫ್ರೂಟ್ ಕಾರ್ಟ್, ಎಲೆಕ್ಟ್ರಿಕ್ ಐಸ್ ಕ್ರೀಮ್ ಕಾರ್ಟ್, ಎಲೆಕ್ಟ್ರಿಕ್ ಫಾಸ್ಟ್ ಫುಡ್ ಕಾರ್ಟ್, ತ್ರಿಚಕ್ರ ವಾಹನ ಸೇರಿದಂತೆ ಒಟ್ಟು 3,236 ವಾಹನಗಳನ್ನು ಸಬ್ಸಿಡಿ ಮೂಲಕ ನೀಡಲಾಗುವುದು. ಈ ಸಂಬಂಧ ಎಲೆಕ್ಟ್ರಿಕ್ ವಾಹನಗಳ ಪ್ರಾತ್ಯಕ್ಷಿಕೆಯನ್ನು ಕೇಂದ್ರ ಕಚೇರಿಯಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಜಿಬಿಎ ವ್ಯಾಪ್ತಿಯಲ್ಲಿ ಹಲವಾರು ಕಲ್ಯಾಣ ಕಾರ್ಯಕ್ರಮಗಳಾದ ಇ-ವೆಂಡಿಂಗ್ ವಾಹನ, ಹೊಲಿಗೆ ಯಂತ್ರ, ಪೌರಕಾರ್ಮಿಕರು, ವೃತ್ತಿನಿರತ ಮಹಿಳೆಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ವಿವಿಧ 14 ರೀತಿಯ ಕೌಶಲ್ಯ ತರಬೇತಿ ಕಾರ್ಯಕ್ರಮಗಳು, ಎಲೆಕ್ಟ್ರಿಕ್ ವೀಲ್ ಚೇರ್, ಸಾರಥಿ ಯೋಜನೆ, ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಒಂಟಿ ಮನೆ ಯೋಜನೆ ಹಾಗೂ ಅಮೃತ ಮಹೋತ್ಸವ ಯೋಜನೆಗಳಿಗೆ ಸಂಬಂಧಿಸಿದಂತೆ ಎಷ್ಟು ಫಲಾನುಭವಿಗಳಿದ್ದಾರೆ ಎಂಬ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ವಿಶೇಷ ಆಯುಕ್ತರಾದ ಡಾ.ಕೆ.ಹರೀಶ್ ಕುಮಾರ್, ಅಪರ ಆಯುಕ್ತರಾದ ಲತಾ, ದಿಗ್ವಿಜಯ್ ಬೋಡ್ಕೆ, ನವೀನ್ ಕುಮಾರ್ ರಾಜು, ನಗರ ಪಾಲಿಕೆಗಳ ಎಲ್ಲಾ ಜಂಟಿ ಆಯುಕ್ತರು, ಕಲ್ಯಾಣ ಕಾರ್ಯಕ್ರಮದ ಸಹಾಯಕ ಆಯುಕ್ತರು ಹಾಗೂ ಕಲ್ಯಾಣ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

ಶೇರ್ ಮಾಡಿ:

Post navigation

Previous: ಎಐ ಯುಗ ಎಂಬುದು ಕೇವಲ ಅಪ್‌ಗ್ರೇಡ್ ಅಲ್ಲ, ಇಡೀ ಆರ್ಥಿಕತೆಯ ಮರುಹೊಂದಿಕೆ
Next: ಒಳ ಮೀಸಲಾತಿ ಹೋರಾಟಗಾರರಿಂದ ಶಾಸಕರಿಗೆ ಮನವಿ

Related Stories

WhatsApp Image 2026-03-07 at 8.48.40 PM
  • ರಾಜ್ಯ

ಅಲ್ಪಸಂಖ್ಯಾತ ಓಲೈಕೆ ಬಹುಸಂಖ್ಯಾತರಿಗೆ ಚಂಬು, ಬ್ರಾಹ್ಮಣ ಸಮುದಾಯವನ್ನು ನಿರ್ಲಕ್ಷಿಸಿದ ಸರ್ಕಾರ- ರಾಘವೇಂದ್ರ ಮಯ್ಯ

ಸಂಜೆ ಪ್ರಭ March 9, 2026
WhatsApp Image 2026-03-07 at 8.27.43 PM
  • ರಾಜ್ಯ

ಒಳ ಮೀಸಲಾತಿ ಹೋರಾಟಗಾರರಿಂದ ಶಾಸಕರಿಗೆ ಮನವಿ

ಸಂಜೆ ಪ್ರಭ March 9, 2026

ಫಾಲೌ ಮಾಡಿ

  • ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್
  • ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ
  • ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ
  • ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ
  • ಕೋಟ ಶ್ರೀನಿವಾಸ ಪೂಜಾರಿಯವರಿಂದ ಕರಾವಳಿ ಜಂಕ್ಷನ್ ನಿಂದ ಕಲ್ಮಾಡಿವರೆಗೆ ರಸ್ತೆ ಕಾಮಗಾರಿ ವೀಕ್ಷಣೆ

ಹಳೆಯ ಸುದ್ದಿ

WhatsApp Image 2026-03-09 at 12.51.01 AM
  • ಬೆಂಗಳೂರು

ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್

ಸಂಜೆ ಪ್ರಭ March 9, 2026
WhatsApp Image 2026-03-09 at 12.39.13 AM
  • ಬೆಂಗಳೂರು

ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ

ಸಂಜೆ ಪ್ರಭ March 9, 2026
WhatsApp Image 2026-03-09 at 12.31.28 AM
  • ಉಡುಪಿ

ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ

ಸಂಜೆ ಪ್ರಭ March 9, 2026
WhatsApp Image 2026-03-08 at 9.36.29 AM
  • ಉಡುಪಿ

ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ

ಸಂಜೆ ಪ್ರಭ March 9, 2026
  • Facebook
  • X
  • YouTube
  • Instagram

Contact Us | About Us | Privacy Policy | Terms of Use

Address: Venkatesh Pai
No. 2068, 8th Main
‘E’ Block, Rajaji Nagar II Stage,
Bangalore – 560010
Karnataka
Email: sanjeprabha@gmail.com
Phone No: +91 98864 96677

[gigatech_copy_rights] | ReviewNews by AF themes.